ಸಂಬಂಧಿತ ಮೌಲ್ಯವರ್ಧಿತ ಸೇವೆಗಳು
ದುಃಖಿತ ಕುಟುಂಬದ ಬದುಕುಳಿದ ಸಂಗಾತಿ/ನಿಕಟ ಬಂಧುಗಳಿಗಾಗಿ ಸಂಪತ್ತಿನ ವ್ಯವಸ್ಥಾಪಕರು, ಉತ್ತರಾಧಿಕಾರ ಯೋಜಕರು ಮತ್ತು ಕುಟುಂಬ ಕಛೇರಿಗಳಿಂದ ಡಿಜಿಟಲ್ ಲಾಕರ್ ಸೇವಾ ಪೂರೈಕೆದಾರರು, ಪಾಸ್‌ವರ್ಡ್ ನಿರ್ವಹಣಾ ಕಂಪನಿಗಳು, ಕಸ್ಟೋಡಿಯನ್ ಸೇವೆಗಳು ಮತ್ತು ಎಕ್ಸಿಕ್ಯೂಟರ್ಶಿಪ್ಸ್, ಟ್ರಸ್ಟಿಶಿಪ್ ಕಂಪನಿಗಳು ಮತ್ತು ಹೂಡಿಕೆ ಸಲಹೆಗಾರರೊಂದಿಗೆ ಮೈತ್ರಿಗಳು ನಡೆಯುತ್ತಿವೆ
ಕ್ಲೈಮ್‌ಗಳ ಇತ್ಯರ್ಥ
ಇತರರೊಂದಿಗೆ ಬರಬೇಕಾದ ಬಾಕಿಯ ಇತ್ಯರ್ಥಕ್ಕಾಗಿ ಅಧಿಕಾರಿಗಳೊಂದಿಗೆ ಪರಸ್ಪರ ಸಂವಹನ ನಡೆಸುವುದು ಸೇರಿದೆ ಆದರೆ ಇಷ್ಟಕ್ಕೇ ಸೀಮಿತವಾಗಿಲ್ಲ.
ತೆರಿಗೆ ಸಹಾಯ
ಯಾವುದೇ ರೀತಿಯ ತೆರಿಗೆ ಸಲಹೆಗಾಗಿ ನಮ್ಮ ಪಟ್ಟಿಯಲ್ಲಿ ಸೇರಿಸಿಕೊಂಡಿರುವ ವೃತ್ತಿಪರರನ್ನು ಪರಿಚಯಿಸುವ ಮೂಲಕ ಫಲಾನುಭವಿ/ಉತ್ತರಾಧಿಕಾರಿಗೆ ಸಹಾಯವನ್ನು ಒದಗಿಸುವುದು. ಉತ್ತರಾಧಿಕಾರ ತೆರಿಗೆ (ಎಫ್‌ಎಟಿಸಿಎ ಮತ್ತು ಸಿಆರ್‌ಎಸ್ ಪ್ರಕಾರವಾಗಿ ಅನುವರ್ತನೆ) ಮತ್ತು ಎನ್‌ಆರ್‌ಐಗಳಿಗಾಗಿ ಸಿಆರ್‌ಎಸ್ ಘೋಷಣೆಗಳಿಗೆ ಸಂಬಂಧಿಸಿದಂತೆ ನಿಯತಕಾಲಿಕ ಅನುವರ್ತನೆಯೊಂದಿಗೆ ಅನಿವಾಸಿ ಭಾರತೀಯರಿಗೆ ಸಹಾಯ ಮಾಡುವುದಕ್ಕಾಗಿ ವೃತ್ತಿಪರ ಚಾರ್ಟರ್ಡ್ ಅಕೌಂಟೆಂಟ್‌ಗಳು ಮತ್ತು ಸಿಎ ಸಂಸ್ಥೆಗಳೊಂದಿಗೆ ಒಗ್ಗೂಡಿ ಕಾರ್ಯನಿರ್ವಹಿಸುವುದು.
ಕಾನೂನು ನೆರವು, ವಿಲ್ ಡ್ರಾಫ್ಟ್ ಸಿದ್ದಪಡಿಸುವುದು ಮತ್ತು ನಿರ್ವಹಣೆ
ಪ್ಯಾನ್ ಇಂಡಿಯಾ ಆಧಾರದ ಮೇಲೆ ಪ್ರಖ್ಯಾತ ವಕೀಲರಿಂದ ಕಾನೂನು ಸಲಹೆಯನ್ನು ಪಡೆಯುವ ಅವಕಾಶ ಮತ್ತು ಸಂಕೀರ್ಣ ಕೌಟುಂಬಿಕ ಪರಿಸ್ಥಿತಿಗಳಿಗೆ ಎಲ್ಲಾ ರೀತಿಯ ಕಾನೂನು ನೆರವು ಮತ್ತು ಬದುಕುಳಿದಿರುವ ಸಂಗಾತಿಯ ಪರವಾಗಿ ವಿಲ್ ಡ್ರಾಫ್ಟ್ ರಚಿಸುವುದು ಮುಂತಾದ ಸೇವೆಗಳು, ಅನ್ವೇಷಣೆ, ಪ್ರೊಬೇಟ್, ಉತ್ತರಾಧಿಕಾರಿ ಪ್ರಮಾಣಪತ್ರ ಇತ್ಯಾದಿಗಳಿಗೆ ಸಂಬಂಧಿಸಿದ ವಿಲ್ ಮ್ಯಾನೇಜ್ಮೆಂಟ್.
ಚರಾಸ್ತಿಯ ವರ್ಗಾವಣೆ ಮತ್ತು ವರ್ಗಾಯಿಸುವಿಕೆ
ಪಿಪಿಎಫ್, ಇಪಿಎಫ್ ಉಳಿತಾಯಗಳು, ಪೋಸ್ಟ್ ಆಫೀಸ್ ಉಳಿತಾಯ, ಬ್ಯಾಂಕ್ ಉಳಿತಾಯ, ಬ್ಯಾಂಕ್/ಕಂಪನಿ ಠೇವಣಿಗಳು, ಮ್ಯೂಚುಯಲ್ ಫಂಡ್ ಹೂಡಿಕೆಗಳು, ಈಕ್ವಿಟಿ ಶೇರ್ ಪೊರ್ಟ್‌ಫೊಲಿಯೊ ಮತ್ತು ವಿಲ್ ಜೊತೆಗೆ ಅಥವಾ ವಿಲ್ ಇರದ ಬಾಂಡುಗಳು ಸೇರಿದಂತೆ ಆದರೆ ಇಷ್ಟಕ್ಕೇ ಸೀಮಿತವಾಗಿರದ ಮೃತರ ಚರಾಸ್ತಿಗಳ ತಡೆರಹಿತ ವರ್ಗಾಯಿಸುವಿಕೆ/ ವರ್ಗಾವಣೆಗಾಗಿ ಮೃತರ ವಾರಸುದಾರರು/ಫಲಾನುಭವಿಗಳೊಂದಿಗೆ ಎಲ್ಲಾ ವಿಧಿವಿಧಾನಗಳನ್ನು ಪೂರ್ಣಗೊಳಿಸಲು ಸಹಾಯ ಮಾಡುವುದು, ಮಾರ್ಗದರ್ಶನ ನೀಡುವುದು.