ನಮ್ಮ ಅನುಕರ್ತರಿಗೆ ತೆರೆದ ಪತ್ರ

ಆತ್ಮೀಯ ಗ್ರಾಹಕರು, ಸಹವರ್ತಿಗಳು ಮತ್ತು ಹಿತೈಷಿಗಳು,

ನಮ್ಮ ಮಾರ್ಗದರ್ಶಕರು ನೀಡಿರುವ ನಿರ್ದೇಶನ ಮತ್ತು ಕಾರ್ಯತಂತ್ರದ ಒಳಹರಿವು, ನಮ್ಮ ತಂಡದ ಉತ್ಸಾಹ ಮತ್ತು ಬದ್ಧತೆ ಮತ್ತು ವೈವಿಧ್ಯಮಯ ಮಾರುಕಟ್ಟೆಯ ಭಾಗೀದಾರರು ನೀಡಿದ ಪ್ರತಿಕ್ರಿಯೆಯ ಪರಿಣಾಮವಾಗಿ, ಐಎನ್‌ಎಸ್‌ಪಿಎಲ್ ಭಾರತದಲ್ಲಿ ಉತ್ತರಾಧಿಕಾರವನ್ನು ಸಕ್ರಿಯಗೊಳಿಸುವ ಸೇವೆಯಲ್ಲಿ ಆದ್ಯಪ್ರವರ್ತಕವಾಗಬಹುದು.

ನಾವು ನಮ್ಮ ಕನಸನ್ನು ಪರಿಕಲ್ಪನೆಯನ್ನಾಗಿ ಪರಿವರ್ತಿಸಿದಾಗ ಮತ್ತು ಅದನ್ನು ಪ್ರಸ್ತುತ ಸೇವಾ ಕೊಡುಗೆಗಳಾಗಿ ಮಾನ್ಯಮಾಡಿದಾಗ ಮತ್ತು ರೂಪುಕೊಟ್ಟಾಗ, ನಮ್ಮ ಸೇವೆಗಳನ್ನು ವಿಮರ್ಶಾತ್ಮಕವಾಗಿ ಮೌಲ್ಯಮಾಪನ ಮಾಡಿರುವ ನಮ್ಮ ಹಿತೈಷಿಗಳು ಮತ್ತು ಬೆಂಬಲಿಗರ ಬೆಂಬಲಕ್ಕಾಗಿ ನಾವೆಲ್ಲರೂ ಅತ್ಯಂತ ಕೃತಜ್ಞರಾಗಿರುತ್ತೇವೆ. ಅವರ ಇನ್‌ಪುಟ್ ನಮ್ಮ ಡ್ರಾಯಿಂಗ್ ಬೋರ್ಡ್‌ಗಳಿಗೆ ಹಿಂತಿರುಗಲು ಮತ್ತು ಅಂತಿಮವಾಗಿ ಬಹುಮಟ್ಟಿಗೆ ಪರಿಪೂರ್ಣ ಮತ್ತು ಮಾರುಕಟ್ಟೆ-ಸ್ವೀಕಾರಾರ್ಹ ಸೇವಾ ಕೊಡುಗೆಗಳನ್ನು ತಲುಪಲು ನಮಗೆ ಅನುವು ಮಾಡಿಕೊಟ್ಟಿದೆ.

‘ಅನುಕರ್ತರು’ ಎಂಬ ಪದವನ್ನು ನಮ್ಮಲ್ಲಿ ಹೆಚ್ಚಿನವರು ಮಾಧ್ಯಮಿಕ ಶಾಲೆಯಲ್ಲಿ ‘ಕಾಪಿಕ್ಯಾಟ್’ ಪದದ ಸಮಾನಾರ್ಥಕವಾಗಿ ಕೊನೆಯದಾಗಿ ಬಳಸಿದ್ದೇವೆ. ನಾವು ಬೆಳೆಯುತ್ತಾ ಹೋದಂತೆ, ಪ್ರೌಢತೆ ಮತ್ತು ಗಂಭೀರತೆಯು ಶೈಕ್ಷಣಿಕ ತೇಜಸ್ಸಿನ ಕಡೆಗೆ ಪರಸ್ಪರ ಗೌರವ ಮತ್ತು ಆರಾಧನೆಯ ಮುಸುಕನ್ನು ಆವರಿಸಿ ‘ಅನುಸಾಧಕ/ಎಮ್ಯುಲೇಟರ್’ ಪದದ ಬಳಕೆಯನ್ನು ಸುಗಮಗೊಳಿಸುತ್ತದೆ.

ಐಎನ್‌ಎಸ್‌ಪಿಎಲ್ ಅನ್ನು ನಕಲು ಮಾಡಲು ಸಂಸ್ಥೆಗಳು/ಜನರು ಇದ್ದಾರೆ ಮತ್ತು ಹಾಗೆ ಮಾಡುವುದನ್ನು ಮುಂದುವರಿಸುತ್ತಾರೆ ಮತ್ತು ಕನಿಷ್ಠ ಭಿನ್ನತೆಗಳೊಂದಿಗೆ ಮೂಲ ಆಲೋಚನೆಗಳಿಂದ ಹೊರಹೊಮ್ಮುವ ತದ್ರೀತಿಯ ಸೇವಾ ಕೊಡುಗೆಗಳನ್ನು ಆಫರ್ ಮಾಡಲಾಗುತ್ತದೆ/ಮಾಡುತ್ತಾರೆ. ಅಂತಹ ಸಂಸ್ಥೆಗಳು ಈ ಸೇವಾ ಕೊಡುಗೆಗಳನ್ನು ತಮ್ಮದೇ ಆದ ಸೃಷ್ಟಿ ಎಂದು ಹೇಳಿಕೊಳ್ಳುತ್ತವೆ. ಸಾಮಾನ್ಯವಾಗಿ ಗ್ರಾಹಕರು/ಕಕ್ಷಿದಾರರು ಸ್ಫೂರ್ತಿ ಮತ್ತು ರೆಪ್ಲಿಕೇಶನ್ ನಡುವಿನ ವ್ಯತ್ಯಾಸವನ್ನು ಗ್ರಹಿಸುವುದಿಲ್ಲ. ಅವರು ತಮ್ಮ ಸೀಮಿತ ಉದ್ದೇಶವನ್ನು ಪೂರೈಸಲು ತಮ್ಮ ಆಯ್ಕೆಯ ಬೆಲೆಯಲ್ಲಿ ಮತ್ತು ಸಮಯದಲ್ಲಿ ತಮ್ಮ ಅಗತ್ಯತೆಯನ್ನು ಪೂರೈಸಿಕೊಳ್ಳಲು ಸೇವಾ ಅಗತ್ಯತೆಗೆ ಆದ್ಯತೆ ನೀಡಬಹುದು. ಆದರೂ, ನಕಲು ಮಾಡುವುದು ಮೂಲಕ್ಕಿಂತ ಭಿನ್ನವಾಗಿದೆ ಎಂದು ಎಲ್ಲರಿಗೂ ತಿಳಿದಿದೆ ಮತ್ತು ಅದನ್ನು ಒಪ್ಪಿಕೊಳ್ಳಲಾಗಿದೆ ಕೂಡ. ಅಷ್ಟುಮಾತ್ರವಲ್ಲ, ಸ್ಫೂರ್ತಿಗೆ ಸಾಕಷ್ಟು ಗಣ್ಯತೆಯನ್ನು ವ್ಯಕ್ತಪಡಿಸಬೇಕಾಗಿದೆ. ನಮ್ಮ ಸೇವಾ ಸೂತ್ರೀಕರಣಕ್ಕೆ ಸ್ಫೂರ್ತಿಯು ಕೇಂದ್ರಬಿಂದುವಾಗಿದೆ.

ಹೀಗಾಗಿ, ನಾವು ಮಾನವ ನಡವಳಿಕೆಯಲ್ಲಿ ಬದಲಾವಣೆಯನ್ನು ಪ್ರಸ್ತಾಪಿಸುವ ಮತ್ತು ಅದನ್ನು ಸುಧಾರಿಸುವ ಅರ್ಥಪೂರ್ಣವಾದ ಸೇವೆಯನ್ನು ಒದಗಿಸುವ ಆಲೋಚನೆಗೆ ಬಂದು ಮುಟ್ಟಿದ್ದೇವೆ. ಇದು ಹೆಚ್ಚು ಆಳವಾದ ವಿಶ್ಲೇಷಣೆಯೊಂದಿಗೆ ಅರಳುವ ಸರಳವಾದ ಕಲ್ಪನೆಯಾಗಿದೆ, ಆದುದರಿಂದ ಸೇವಾ ಕೊಡುಗೆಯ ಮೂಲಕ ಸಮಗ್ರ ಪರಿಹಾರವನ್ನು ವಿನ್ಯಾಸಗೊಳಿಸಲಾಗಿದೆ. ನಮ್ಮ ಏಕೈಕ ಉದ್ದೇಶವೆಂದರೆ ಪಿತ್ರಾರ್ಜಿತವನ್ನು ಸಕ್ರಿಯಗೊಳಿಸುವುದಾಗಿದೆ.

ಕನಸುಗಾರರು-ಪರಿವರ್ತಿತ-ನಿರ್ವಾಹಕರಾಗಿ, ಐಎನ್‌ಎಸ್‌ಪಿಎಲ್ ಈ ವಿಷಯಕ್ಕೆ ಸಂಬಂಧಿಸಿದಂತೆ ಹ್ಯಾಂಡ್ಸ್-ಆನ್ ಸೇವೆಯನ್ನು ಒದಗಿಸಿದೆ, ನಮ್ಮ ಪಾದಗಳು ನೆಲದ ಮೇಲಿವೆ, ನಮ್ಮ ಕಣ್ಣುಗಳು ವಿಕಾಸಗೊಳ್ಳುತ್ತಿರುವ ಡೈನಾಮಿಕ್ಸ್ ಮೇಲಿವೆ ಮತ್ತು ನಮ್ಮ ಮನಸ್ಸು ಮತ್ತು ಹೃದಯಗಳು ಪರಾನುಭೂತಿಯು ನಿರಾಸಕ್ತಿಯನ್ನು ಮೀರಿಸುವ ರೀತಿಯಲ್ಲಿ ಹೊಂದಿಕೊಂಡಿವೆ.

ನಾವು ಒಂದು ತಂಡವಾಗಿ ಹೀಗೆ ಪ್ರತಿಜ್ಞೆ ಮಾಡುತ್ತೇವೆ – ದುಃಖಿತ ಕುಟುಂಬಕ್ಕೆ ನಮ್ರತೆಯಿಂದ ಸೇವೆ ಸಲ್ಲಿಸುತ್ತೇವೆ ಮತ್ತು ಜೀವನವನ್ನು ಜೀವಿಸಲು ಕಲಿಯಲು ಹಠಾತ್ ಶೂನ್ಯಭಾವದೊಂದಿಗೆ ರಾಜಿಮಾಡಿಕೊಳ್ಳಲು ಅವರಿಗೆ ಸಹಾಯ ಮಾಡುತ್ತೇವೆ.

ಸಂಸ್ಥಾಪಕರು ಮತ್ತು ಪ್ರಾರಂಭಕರು

wpChatIcon