ನಮ್ಮ ಸಲಹಾ ಮಂಡಳಿ

Kishori J Udeshi

ಕಿಶೋರಿ ಜೆ ಉದೇಶಿ

ಶ್ರೀಮತಿ ಕಿಶೋರಿ ಜೆ ಉದೇಶಿ ಅವರು ಭಾರತೀಯ ರಿಸರ್ವ್ ಬ್ಯಾಂಕ್‌ನ ಡೆಪ್ಯುಟಿ ಗವರ್ನರ್ ಆಗಿ ನೇಮಕವಾದ ಮೊದಲ ಮಹಿಳೆಯಾಗಿದ್ದಾರೆ, ಅವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮಂಡಳಿಯಲ್ಲಿ ನಾಮನಿರ್ದೇಶನಗೊಂಡ ಭಾರತೀಯ ರಿಸರ್ವ್ ಬ್ಯಾಂಕಿನ ಮೊದಲ ಕಾರ್ಯನಿರ್ವಾಹಕ ನಿರ್ದೇಶಕಿ ಎಂಬ ಹೆಗ್ಗಳಿಕೆಯನ್ನೂ ಪಡೆದಿದ್ದಾರೆ. ಡೆಪ್ಯುಟಿ ಗವರ್ನರ್ ಆಗಿ, ಅವರ ಪೋರ್ಟ್‌ಫೊಲಿಯೊ ಬ್ಯಾಂಕಿಂಗ್ ಮತ್ತು ನಾನ್-ಬ್ಯಾಂಕಿಂಗ್‌ ಸೆಕ್ಟರ್‌ನ ನಿಯಂತ್ರಣ ಮತ್ತು ಮೇಲ್ವಿಚಾರಣೆಯನ್ನು ಒಳಗೊಂಡಿತ್ತು. ಅವರು ಭಾರತೀಯ ರಿಸರ್ವ್ ಬ್ಯಾಂಕ್ ಅನ್ನು ಕೋರ್ ಪ್ರಿನ್ಸಿಪಲ್ಸ್ ಲಿಏಸಾನ್ ಗ್ರೂಪ್ ಮತ್ತು ಕೋರ್ ಪ್ರಿನ್ಸಿಪಲ್ಸ್ ವರ್ಕಿಂಗ್ ಗ್ರೂಪ್ ಆನ್ ಕ್ಯಾಪಿಟಲ್, ಬೇಸಲ್ ಕಮಿಟಿ ಆನ್ ಬ್ಯಾಂಕಿಂಗ್ ಸೂಪರ್‌ವಿಷನ್ ಅನ್ನು ಪ್ರತಿನಿಧಿಸಿದ್ದರು, ಇದನ್ನು ಬ್ಯಾಂಕ್ ಫಾರ್ ಇಂಟರ್‌ನ್ಯಾಶನಲ್ ಸೆಟಲ್‌ಮೆಂಟ್ಸ್, ಸ್ವಿಟ್ಜರ್ಲೆಂಡ್ ಸ್ಥಾಪಿಸಿತ್ತು.

ಡೆಪ್ಯುಟಿ ಗವರ್ನರ್ ಆಗಿ ಅವರು ಸೆಬಿ, ನಬಾರ್ಡ್ ಮತ್ತು ಎಕ್ಸಿಮ್ ಬ್ಯಾಂಕ್ ಮಂಡಳಿಯಲ್ಲಿದ್ದರು ಹಾಗೂ ಜೊತೆಗೆ ಬೆಂಗಳೂರಿನ ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ್ (ಪ್ರೈ.) ಲಿಮಿಟೆಡ್‌ನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಅವರು ಡೆಪಾಸಿಟ್ ಇನ್ಶೂರೆನ್ಸ್ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಶನ್‌ನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. 2006 ರಲ್ಲಿ, ಇವರು ಭಾರತೀಯ ರಿಸರ್ವ್ ಬ್ಯಾಂಕಿನಿಂದ ಬ್ಯಾಂಕಿಂಗ್ ಕೋಡ್ಸ್ ಮತ್ತು ಸ್ಟ್ಯಾಂಡರ್ಡ್ಸ್ ಬೋರ್ಡ್ ಆಫ್ ಇಂಡಿಯಾದ ಅಧ್ಯಕ್ಷರಾಗಿ ನೇಮಕಗೊಂಡರು. ಮತ್ತು 2011ರ ಡಿಸೆಂಬರ್ ತಿಂಗಳಿನಲ್ಲಿ ಈ ಅಧಿಕಾರ ಸ್ಥಾನದಿಂದ ಹೊರಬಂದರು. ಭಾರತ ಸರ್ಕಾರ (GOI) ಅವರನ್ನು ನ್ಯಾಯಮೂರ್ತಿ ಶ್ರೀಕೃಷ್ಣ ಅವರ ಅಧ್ಯಕ್ಷತೆಯ ಹಣಕಾಸು ವಲಯದ ಶಾಸಕಾಂಗ ಸುಧಾರಣಾ ಆಯೋಗದ ಸದಸ್ಯರನ್ನಾಗಿ ನೇಮಿಸಿತು. ಮಹಾರಾಷ್ಟ್ರ ಸರ್ಕಾರವು ಅವರನ್ನು ಮುಂಬೈನ ಇಂಡಿಯನ್ ರೆಡ್‌ ಕ್ರಾಸ್ ಸೊಸೈಟಿಯ ಮಂಡಳಿಗೂ ನಾಮನಿರ್ದೇಶನ ಮಾಡಿತು. ಇವರು ಕೆಲವು ಕಂಪನಿಗಳ ಮಂಡಳಿಗಳಲ್ಲಿ ಇಂಡಿಪೆಂಡೆಂಟ್ ನಾನ್-ಎಕ್ಸಿಕ್ಯುಟಿವ್ ಡೈರೆಕ್ಟರ್ ಕೂಡ ಆಗಿದ್ದಾರೆ. ಇವರು ಬಾಂಬೆ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಎಂಎ ಪದವಿಯನ್ನೂ ಪಡೆದಿದ್ದಾರೆ.

Berjis Desai

ಬೆರ್ಜಿಸ್ ದೇಸಾಯಿ

ಈ ಮುಂಚೆ ಜೆ. ಸಾಗರ್ ಅಸೋಸಿಯೇಟ್ಸ್‌ನ ಮಾಜಿ ಹಿರಿಯ ಪಾಲುದಾರರಾಗಿದ್ದ ಶ್ರೀ ದೇಸಾಯಿ ಅವರು ಈಗ ಖಾಸಗಿ ವಕೀಲರಾಗಿದ್ದಾರೆ. ಇವರು ಕಾರ್ಪೊರೇಟ್ ಮತ್ತು ವಾಣಿಜ್ಯ ಕಾನೂನಿನಲ್ಲಿ ಪರಿಣಿತರಾಗಿದ್ದಾರೆ ಮತ್ತು 1980 ರಿಂದ ಈ ವೃತ್ತಿ ನಡೆಸುತ್ತಿದ್ದಾರೆ. ಮತ್ತು ಇವರು 1997 ರಿಂದ 2003 ರವರೆಗೆ ಉದ್ವಾಡಿಯಾ, ಉದೇಶಿ ಅಂಡ್ ಬೆರ್ಜಿಸ್‌ನ ವ್ಯವಸ್ಥಾಪಕ ಪಾಲುದಾರರಾಗಿದ್ದರು. ಶ್ರೀ ದೇಸಾಯಿ ಅವರು ಪ್ರಸ್ತುತ ಇಂಡಿಯನ್ ಕೌನ್ಸಿಲ್ ಆಫ್ ಆರ್ಬಿಟ್ರೇಷನ್ ಮತ್ತು ಲಂಡನ್ ಕೋರ್ಟ್ ಆಫ್ ಇಂಟರ್ನ್ಯಾಷನಲ್ ಆರ್ಬಿಟ್ರೇಶನ್‌ನ ಆರ್ಬಿಟ್ರೇಟರ್‌ಗಳ ಪ್ಯಾನಲ್‌ನಲ್ಲಿದ್ದಾರೆ. ಇವರು ಭಾರತದ ಪ್ರಮುಖ ದಿನಪತ್ರಿಕೆಯೊಂದರಲ್ಲಿ ಪತ್ರಕರ್ತರಾಗಿಯೂ ಕೆಲಸ ಮಾಡಿದ್ದಾರೆ ಮತ್ತು ಅಮೇರಿಕನ್ ಆರ್ಬಿಟ್ರೇಶನ್ ಅಸೋಸಿಯೇಷನ್‌ನ ಸಹಾಯಕ ಸದಸ್ಯರಾಗಿದ್ದಾರೆ, ಐಸಿಸಿ-ಇಂಡಿಯಾ ಮತ್ತು ಬಾಂಬೆ-ಇನ್‌ಕಾರ್ಪೊರೇಟೆಡ್ ಲಾ ಸೊಸೈಟಿಯ ಒಬ್ಬ ಸದಸ್ಯರೂ ಆಗಿದ್ದಾರೆ. ಇವರು ಪ್ರಸ್ತುತ ಅನೇಕ ಕಾರ್ಪೊರೇಟ್‌ಗಳಲ್ಲಿ ನಾನ್-ಎಕ್ಸಿಕ್ಯುಟಿವ್ ಇಂಡಿಪೆಂಡೆಂಟ್ ಬೋರ್ಡ್‌ನ ಸದಸ್ಯರಾಗಿ ಮಂಡಳಿಯ ಸ್ಥಾನಗಳನ್ನು ಅಲಂಕರಿಸಿದ್ದಾರೆ.

P H Ravikumar

ಪಿ. ಹೆಚ್. ರವಿಕುಮಾರ್

ಫೈನಾನ್ಷಿಯಲ್ ಸರ್ವಿಸಸ್ ವಲಯದಲ್ಲಿ ನಾಲ್ಕು ದಶಕಗಳಗಿಂತ ಹೆಚ್ಚಿನ ಅನುಭವ ಹೊಂದಿರುವ ವಾಣಿಜ್ಯ ಬ್ಯಾಂಕರ್ ಶ್ರೀ ರವಿಕುಮಾರ್ ಅವರು ವಾಸ್ತು ಹೌಸಿಂಗ್ ಫೈನಾನ್ಸ್‌ನಲ್ಲಿ ನಾನ್-ಎಕ್ಸಿಕ್ಯುಟಿವ್ ಡೈರೆಕ್ಟರ್ ಆಗಿದ್ದಾರೆ. ಇವರು ಐಸಿಐಸಿಐ ಬ್ಯಾಂಕ್ ಲಿಮಿಟೆಡ್ ಅನ್ನು ಸ್ಥಾಪಿಸಿದ ಮತ್ತು ನಿರ್ಮಿಸಿದ ಪ್ರಮುಖ ತಂಡದ ಭಾಗವಾಗಿದ್ದರು. ಇವರ ತಂಡದೊಂದಿಗೆ ಇವರು ನ್ಯಾಶನಲ್ ಕಮೊಡಿಟೀಸ್ ಅಂಡ್ ಡೆರಿವೆಟಿವ್ಸ್ ಎಕ್ಸ್‌ಚೇಂಜ್ ಲಿಮಿಟೆಡ್‌ನ ಪರಿಕಲ್ಪನೆಯನ್ನು ಸ್ಥಾಪಿಸಿ ಸಂಸ್ಥಾಪಕರು, ವ್ಯವಸ್ಥಾಪಕ ನಿರ್ದೇಶಕರು ಮತ್ತು ಸಿಇಒ ಆಗಿಯೂ ಸಹ ಸೇವೆ ಸಲ್ಲಿಸಿದ್ದಾರೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕರ್ಸ್ ಮತ್ತು ಚಾರ್ಟರ್ಡ್ ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕರ್ಸ್ ಲಂಡನ್‌ನ ಅಸೋಸಿಯೇಟ್ ಆಗಿಯೂ ವೃತ್ತಿಪರ ಅರ್ಹತೆಗಳೊಂದಿಗೆ ವಾಣಿಜ್ಯ ಪದವೀಧರರಾಗಿದ್ದಾರೆ. ಇವರು ಲಂಡನ್‌ನ ಸೆಕ್ಯುರಿಟೀಸ್ ಇನ್ವೆಸ್ಟ್‌ಮೆಂಟ್ ಇನ್‌ಸ್ಟಿಟ್ಯೂಟ್‌ನ ಫೆಲೋ ಕೂಡ ಆಗಿದ್ದಾರೆ.

ಬಾಬಿ ಪಾರಿಖ್

ಬಾಬಿ ಪಾರಿಖ್ ಅವರು ‘ಬಾಬಿ ಪಾರಿಖ್ ಅಸೋಸಿಯೇಟ್ಸ್’ನ ಸಂಸ್ಥಾಪಕರಾಗಿದ್ದಾರೆ, ಇದು ಕಾರ್ಯತಂತ್ರದ ತೆರಿಗೆ ಮತ್ತು ನಿಯಂತ್ರಕ ಸಲಹಾ ಸೇವೆಗಳನ್ನು ಒದಗಿಸುವುದರಲ್ಲಿ ತೊಡಗಿರುವ ಬಾಟಿಕ್ ಸಂಸ್ಥೆ ಆಗಿದೆ. ಒಳಬರುವ, ಹೊರಹೋಗುವ ಅಥವಾ ಸಂಪೂರ್ಣ ದೇಶೀಯ ವಹಿವಾಟುಗಳು ಮತ್ತು ಇತರ ರೀತಿಯ ವ್ಯಾಪಾರ ಮರುಸಂಘಟನೆಗಳಿಗೆ ಸಂಬಂಧಿಸಿದಂತೆ ತೆರಿಗೆ ಮತ್ತು ನಿಯಂತ್ರಕ ಸಲಹೆಯನ್ನು ಒದಗಿಸುವುದು ಇವರು ಗಮನವನ್ನು ಕೇಂದ್ರೀಕರಿಸುವ ಪ್ರಾಥಮಿಕ ಕ್ಷೇತ್ರವಾಗಿದೆ. ಬಾಬಿ ಅವರು ಖಾಸಗಿ ಇಕ್ವಿಟಿ ಫಂಡ್‌ಗಳು, ಇತರ ಸಾಂಸ್ಥಿಕ ಹೂಡಿಕೆದಾರರು ಮತ್ತು ವ್ಯವಹಾರಗಳ ಮಾಲೀಕರು ಮತ್ತು ವ್ಯವಸ್ಥಾಪಕರೊಂದಿಗೆ ವ್ಯಾಪಕವಾಗಿ ಕೆಲಸ ಮಾಡುತ್ತಾರೆ. ಇವರು ಹೊಸ ನಿಯಮಗಳು ಮತ್ತು ನೀತಿಗಳ ರಚನೆಯಲ್ಲಿ ಸಹಾಯ ಮಾಡಲು ಇನ್‌ಪುಟ್‌ಗಳನ್ನು ಒದಗಿಸುವಲ್ಲಿ ನಿಯಂತ್ರಕರು ಮತ್ತು ನೀತಿ ಸೂತ್ರದಾರರೊಂದಿಗೆ ಸಹ ನಿಕಟವಾಗಿ ಕೆಲಸ ಮಾಡುತ್ತಾರೆ. ಬಾಬಿ ಅವರು ಬಿಎಂಆರ್ ಅಡ್ವೈಸರ್ಸ್‌ನ ಸಹ-ಸಂಸ್ಥಾಪಕರಾಗಿದ್ದರು, ಇದು ಹೆಚ್ಚು ಗೌರವಾನ್ವಿತ ತೆರಿಗೆ ಮತ್ತು ವಹಿವಾಟು ಸಂಸ್ಥೆಯಾಗಿದೆ, ಅವರು 12 ವರ್ಷಗಳಿಂದ ಇದರ ಸ್ಥಾಪನೆಗೆ ಮತ್ತು ಮುನ್ನಡೆಸುವಿಕೆಗೆ ಸಹಾಯ ಮಾಡಿದರು. ಈ ಹಿಂದೆ, ಭಾರತದಲ್ಲಿ ಅರ್ನ್‌ಸ್ಟ್ ಅಂಡ್ ಯಂಗ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದರು ಮತ್ತು ಆರ್ಥರ್ ಆಂಡರ್ಸನ್‌ನ ದೇಶದ ವ್ಯವಸ್ಥಾಪಕ ಪಾಲುದಾರರಾಗಿದ್ದ ಬಾಬಿ ಅವರು ಹಲವಾರು ಬಿಸಿನೆಸ್ ಮತ್ತು ವ್ಯಾಪಾರ ಸಂಘಗಳ ಸದಸ್ಯರಾಗಿದ್ದರು, ಜೊತೆಗೆ ಸರ್ಕಾರೇತರ, ಲಾಭೋದ್ದೇಶವಿಲ್ಲದ ಸಂಸ್ಥೆಗಳು ಮತ್ತು ಖಾಸಗಿ ಹಾಗೂ ಪಟ್ಟಿಮಾಡಲಾದ ಭಾರತೀಯ ಕಂಪನಿಗಳ ಸಲಹಾ ಮತ್ತು ಕಾರ್ಯನಿರ್ವಾಹಕ ಮಂಡಳಿಗಳ ಸದಸ್ಯರಾಗಿದ್ದಾರೆ. ಬಾಬಿ ಅವರು ಮುಂಬೈ ವಿಶ್ವವಿದ್ಯಾಲಯದಿಂದ ವಾಣಿಜ್ಯದಲ್ಲಿ ಪದವೀಧರರಾಗಿದ್ದಾರೆ ಮತ್ತು ಅರ್ಹತೆ ಪಡೆದ ಚಾರ್ಟರ್ಡ್ ಅಕೌಂಟೆಂಟ್ ಕೂಡ ಆಗಿದ್ದಾರೆ

ಕೆನ್ನೆತ್ ಆಂಡ್ರೇಡ್

ಓಲ್ಡ್ ಬ್ರಿಡ್ಜ್ ಕ್ಯಾಪಿಟಲ್ ಮ್ಯಾನೇಜ್‌ಮೆಂಟ್‌ನ ಸಂಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಹೂಡಿಕೆದಾರ ಅಧಿಕಾರಿಯಾಗಿರುವ ಕೆನ್ನೆತ್ ಅವರು ಭಾರತೀಯ ಬಂಡವಾಳ ಮಾರುಕಟ್ಟೆಗಳಲ್ಲಿ 26 ವರ್ಷಗಳಿಗಿಂತ ಹೆಚ್ಚಿನ ಅನುಭವವನ್ನು ಹೊಂದಿದ್ದಾರೆ; ಅವರ ಗಮನವನ್ನು ಕೇಂದ್ರೀಕರಿಸಿರುವ ಮುಖ್ಯ ಕ್ಷೇತ್ರವು – ಪೋರ್ಟ್‌ಫೋಲಿಯೋ ನಿರ್ವಹಣೆ ಮತ್ತು ಹೂಡಿಕೆ ಸಂಶೋಧನೆಯಾಗಿದೆ. ಇದಕ್ಕೂ ಮೊದಲು, ಅವರು ಐಡಿಎಫ್‌ಸಿ ಅಸೆಟ್ ಮ್ಯಾನೇಜ್‌ಮೆಂಟ್‌ನಲ್ಲಿ ಮುಖ್ಯ ಹೂಡಿಕೆದಾರ ಅಧಿಕಾರಿಯಾಗಿದ್ದರು, ಅಲ್ಲಿ ಇವರು US$ 9 ಶತಕೋಟಿಯ (ಬಿಲಿಯನ್) ಕಾರ್ಪಸ್ ಅನ್ನು ನೋಡಿಕೊಳ್ಳುತ್ತಿದ್ದರು. ಅವರ ಸಮರ್ಥ ನಾಯಕತ್ವದಲ್ಲಿ, ಐಡಿಎಫ್‌ಸಿ ಅಸೆಟ್ ಮ್ಯಾನೇಜ್‌ಮೆಂಟ್ ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಮ್ಯೂಚುಯಲ್ ಫಂಡ್ ಹೌಸ್ ಎಂದು ಸ್ಥಾನ ಪಡೆದಿತ್ತು. ಐಡಿಎಫ್‌ಸಿ ಅಸೆಟ್ ಮ್ಯಾನೇಜ್‌ಮೆಂಟ್‌ನೊಂದಿಗಿನ ಇವರ ಕಾರ್ಯಾವಧಿಗೆ ಮೊದಲು, ಇವರು ಕೊಟಕ್ ಮಹೀಂದ್ರಾ ಅಸೆಟ್ ಮ್ಯಾನೇಜ್‌ಮೆಂಟ್‌ನಲ್ಲಿ ಪೋರ್ಟ್‌ಫೋಲಿಯೋ ಮ್ಯಾನೇಜರ್ ಆಗಿದ್ದರು ಮತ್ತು ಎರಡೂ ಸಂಸ್ಥೆಗಳಿಗೆ ಆಸ್ತಿ ನಿರ್ವಹಣೆ ವ್ಯವಹಾರವನ್ನು ಬೆಳೆಸುವಲ್ಲಿ ಪ್ರಮುಖ ಸಂಪನ್ಮೂಲವಾಗಿ ಸೇವೆ ಸಲ್ಲಿಸಿದ್ದಾರೆ. ಇವರು ಮುಂಬೈ ವಿಶ್ವವಿದ್ಯಾಲಯದ ಎನ್.ಎಂ ಕಾಲೇಜ್ ಆಫ್ ಕಾಮರ್ಸ್ ಅಂಡ್ ಇಕನಾಮಿಕ್ಸ್‌ನಿಂದ ವಾಣಿಜ್ಯ ಪದವೀಧರರಾಗಿದ್ದಾರೆ.

wpChatIcon